ಭೂಮಿ ಅಥವಾ ಯಾವುದೇ ಆಕಾಶಕಾಯ ತನ್ನ ಅಕ್ಷದ ಮೇಲೆ ಬುಗುರಿಯಂತೆ ಸುತ್ತುವ ವಿದ್ಯಮಾನಕ್ಕೂ ಆವರ್ತನೆ ಅಥವಾ ಭ್ರಮಣೆ ಎಂಬ ಹೆಸರಿದೆ. ಉದಾ: ಭೂ ಆವರ್ತನಾವಧಿ 24 ಗಂಟೆಗಳು.

ಹಗಲಿನ ಎರಡನೆಯ ಅರ್ಧದ ಪ್ರಾರಂಭಕಾಲ. ಸೂರ್ಯನಿಗೆ ಅಭಿಮುಖವಾದ ನಮ್ಮ ಶರೀರ ಅಥವಾ ಪದಾರ್ಥದ ನೆರಳು ಪಶ್ಚಿಮದಿಂದ ಪುರ್ವದಿಕ್ಕಿಗೆ ತಿರುಗುವ ಸಮಯ. ಈ ಕಾಲದ ಪುರ್ವಭಾಗ ಪುರ್ವಾಹ್ನ, ಪಶ್ಚಿಮ ಭಾಗ ಅಪರಾಹ್ನ. ಈ ಕಾಲವಿಭಾಗವನ್ನನುಸರಿಸಿ ಧರ್ಮಶಾಸ್ತ್ರದಲ್ಲಿ ಕೆಲವು ವಿಧಿಗಳು ವಿಹಿತವಾಗಿವೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ